ಪ್ರೀತಿಗೆ ರಾಯಭಾರಿ ಈ ನಮ್ಮ ಯಜಮಾನ
ಇತ್ತೀಚೆಗೆ ಒಂದು ವಿಶಿಷ್ಟ ಸುದ್ದಿ ಒಬ್ಬರ ಬಾಯಿಮಾತಿನಿಂದ ಕೇಳಿ ಬಂತು, ಅದು ಏನೆಂದರೆ ಒಬ್ಬ ವಿಕಲಚೇತನ ಆಟೋ ಚಾಲಕನಾಗಿದ್ದ ಮತ್ತು ಆ ಆಟೋ ಅವನಿಗೆ ಜೀವನೋಪಾಯದ ಸಾಧನವಾಗಲಿ ಎಂದು ಕನ್ನಡದ ಹೆಸರಾಂತ ನಟ ದರ್ಶನ ಕೊಡಿಸಿದ್ದು ಅಂತ.
ಚಾಲೆಂಜಿಂಗ್ ಸ್ಟಾರ್ ಎಂದು ಬಿರುದು ಪಡೆದಿರುವ ಮೇರುನಟನ ಹೃದಯವಂತಿಕೆ ಕಥೆಗಳು ಇದೇ ರೀತಿ ಎಲ್ಲ ಕಡೆಯಿಂದ ಕೇಳಿ ಬರುವುದು ತುಂಬಾ ಸಾಮಾನ್ಯ. ಅವರ ಈ ಉದಾರ ಮನಸ್ಸು ಅವರಿಗೆ ಅಭಿಮಾನಿಗಳ ಮಹಾಪೂರವೇ ಗಳಿಸಿದೆ. ಹೀಗಾಗಿ ಅವರ ಎಲ್ಲಾ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆಯುವುದು ಖಚಿತ, ಅದಕ್ಕಾಗಿಯೇ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕೂಡ ಕರೆಯಲಾಗುವುದು.
ಡಿ ಬಾಸ್ ಎಂದು ಕರೆಯಲ್ಪಟ್ಟರೂ ಅವರ ಮನಸ್ಸು ಎಷ್ಟು ಮುಗ್ಧ ಎನ್ನುವುದಕ್ಕೆ ಅವರ ಪ್ರಾಣಿ ಪ್ರೇಮವೇ ಸಾಕ್ಷಿ. ಅದಕ್ಕಂತಾನೆ ಅವರಿಗೆ ಕರ್ನಾಟಕ ರಾಜ್ಯದ ಅರಣ್ಯ ಮತ್ತು ಕೃಷಿ ಇಲಾಖೆಗಳ ರಾಯಭಾರಿ ಎಂದು ಕರ್ನಾಟಕ ಸರ್ಕಾರ ಆಯ್ಕೆ ಮಾಡಿದ್ದಾರೆ. ಮತ್ತು ಅವರ ತೋಟದಮನೆಯಲ್ಲಿ ಕುದುರೆಗಳನ್ನ, ಬೇರೆ ಬೇರೆ ತಳಿಯ ಹಸುಗಳನ್ನ, ಮೊಲ, ಗಿಣಿ, ಹೀಗೆ ಸುಮಾರು ಪ್ರಾಣಿಗಳನ್ನ ಸಾಕಿದ್ದಾರೆ. ಅವರ ಅಭಿಮಾನಿಗಳನ್ನ ಮತ್ತು ಗೆಳೆಯರನ್ನ ತೋಟದಮನೆ ತೋರಿಸುವುದು ಅವರ ಸಾಮಾನ್ಯ ಅಭ್ಯಾಸ. ಕೊರೊನ ಇಂದ ಪ್ರಾಣಿ ಸಂಗ್ರಹಾಲಯಗಳು ನಷ್ಟ ಅನುಭವಿಸುತ್ತಿದ್ದಾಗ ಜನರನ್ನು ಪ್ರಾಣಿಗಳನ್ನು ದತ್ತು ತೊಗೊಳುವಂತೆ ಮನವಿ ಕೂಡ ಮಾಡಿದ್ದರು.
ದರ್ಶನ್ ಅವರು ಕರಿಯಾ, ನಮ್ಮ ಪ್ರೀತಿಯ ರಾಮು, ಕಲಾಸಿಪಾಳ್ಯ, ಗಜ, ಸಾರಥಿ ಮತ್ತು ಬುಲ್ ಬುಲ್ ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಂಸೆಯನ್ನು ಪಡೆದುದ್ದು ಅಲ್ಲದೆ ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ವರುಷಗಾಲ ಕಾಲ ಕನ್ನಡ ಚಿತ್ರರಂಗದಲ್ಲಿದ್ದು ಅವರ ಸಾಧನೆ ಕೂಡ ಅಮೋಘವಾಗಿದೆ.
ಭಾರತದಲ್ಲಿಯೇ ಅತೀ ಕೆಲವೇ ಕೆಲವು ಸೆಲೆಬ್ರಿಟಿಗಳು ಅತ್ಯಂತ ಬೆಲೆಬಾಳುವ ಕಾರುಗಳನ್ನು ಹೊಂದಿದ್ದಾರೆ ಅದರಲ್ಲಿ ದರ್ಶನ ಕೂಡ ಒಬ್ಬರು. ಅಪೂರ್ವ ಕಾರುಗಳನ್ನು ಸಂಗ್ರಹಿಸುವುದು ಇವರ ಹವ್ಯಾಸ ಕೂಡ.
ಕೊರೊನ ಸಮಯದಲ್ಲಿ ಆಮ್ಲಜನಕ ಆಭಾವದಿಂದ ಎಷ್ಟು ತೊಂದರೆ ಆಯ್ತು ಅದು ಎಲ್ಲರಿಗೂ ಗೊತ್ತಿದ್ದ ವಿಷಯ, ಅಂತಹ ಕಷ್ಟದ ಸಮಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್ ಗಳನ್ನ ನಾನಾ ಆಸ್ಪತ್ರೆಗಳಿಗೆ ದಾನ ಕೂಡ ಮಾಡಿದ್ದರು. ಇಂತಹ ಯಾವುದೇ ಕಷ್ಟದ ಸಮಯದಲ್ಲಿ ಮುಂದೆ ಬಂದು ಸಹಾಯ ಹಸ್ತ ಚಾಚಿಲ್ಲ ಅಂತ ಇಲ್ಲ ನಮ್ಮ ಚಾಲೆಂಜಿಂಗ್ ಸ್ಟಾರ್.
ಕನ್ನಡ ಚಿತ್ರರಂಗದಲ್ಲಿ ಬೇರೆ ನಟ ನಟಿಯರ ಜೊತೆ ಕೂಡ ಯಾವುದೇ ಸ್ಪರ್ಧೆ ಅಥವಾ ಕಾಂಟ್ರವರ್ಸಿ ಇಲ್ಲದೆ ತುಂಬಾ ಒಳ್ಳೆ ಸಂಬಂಧ ಹೊಂದಿದ್ದಾರೆ ದರ್ಶನ. ಕಿಚ್ಚ ಸುದೀಪ್ ಆಗಲಿ ಗೋಲ್ಡನ್ ಸ್ಟಾರ್ ಗಣೇಶ್ ಆಗಲಿ ಪವರ್ ಸ್ಟಾರ್ ಪುನೀತ್ ಆಗಲಿ, ಎಲ್ಲರೂ ಅವರ ಬಗ್ಗೆ ತುಂಬಾ ಗೌರವ ಮತ್ತು ಬಾಂಧವ್ಯ ಹೊಂದಿದ್ದಾರೆ.
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಎಂಬ ಹಾಡಿನಂತೆ ದರ್ಶನ್ ಕಷ್ಟದಲ್ಲಿದ್ದ ಸಾವಿರ ಸಾವಿರಗಟ್ಟಲೆ ಬಡ ಜನರಿಗೆ ಅನ್ನ ದಾಸೋಹ ಕಾರ್ಯಕ್ರಮಗಳನ್ನ ಖಾಯಂ ಆಯೋಜನೆ ಮಾಡುವುದು ಇವರ ಅಭ್ಯಾಸ.
ಎಷ್ಟೋ ವಿವಾದಗಳು ಇವರನ್ನ ಹುಡುಕಿಕೊಂಡು ಬಂದರೂ ಯಾವುದೇ ವಿಷಯ ಸಾಬೀತು ಆಗಲಿಲ್ಲ, ಮತ್ತು ಅಂತಹ ಎಷ್ಟೇ ದೊಡ್ಡ ವಿವಾದ ಬಂದರೂ ಕೂಡ ಇವರು ಅಳುಗಾಡಲಿಲ್ಲ. ಮನಸ್ಸು ಸ್ವಚ್ಛಂದವಾಗಿದ್ದರೆ ಏಕೆ ಹೆದರಬೇಕು ಎನ್ನುವ ಅಪೂರ್ವ ವ್ಯಕ್ತಿತ್ವ ಈ ಮನುಷನದು.